ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ೧೯೯೮ರಲ್ಲಿ ಸ್ಥಾಪನೆಯಾಯಿತು. ಸರ್.ಎಂ.ವಿಶ್ವೇಶ್ವರಯ್ಯನವರ ಹೆಸರಿನಲ್ಲಿ ಸ್ಥಾಪಿಸಲಾದ ಈ ವಿಶ್ವವಿದ್ಯಾಲದ ವ್ಯಾಪ್ತಿಯಲ್ಲಿ ಕರ್ನಾಟಕರಾಜ್ಯದ ಸುಮಾರು ೨೦೦ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಬರುತ್ತವೆ. == ಉಪಕುಲಪತಿಗಳು == ಡಾ.ಎಸ್.ರಾಜಸೇಖರಯ್ಯ ಡಾ.ಕೆ.ಬಾಲವೀರ ರೆಡ್ಡಿ ಪ್ರೋ.ಹೆಚ್.ಪಿ.ಖಿಂಚ ಡಾ.ಹೆಚ್.ಮಹೇಶಪ್ಪ ಡಾ.ಕರಿಸಿದ್ದಪ್ಪ == ಅಂಕಿ ಅಂಶಗಳು == ತಾಂತ್ರಿಕ ಶಿಕ್ಷಣದ ಸುಮಾರು ೨೫ ಕ್ಕೂ (ಅಧಿಕ)ವಿವಿಧ ಪದವಿ ಹಾಗೂ ೫೪ ಸ್ನಾತಕೋತ್ತರ ಪದವಿ ವಿಭಾಗಳಲ್ಲಿ ಪದವಿಗಳನ್ನು ಈ ವಿಶ್ವವಿದ್ಯಾಲಯ ಪ್ರದಾನ ಮಾಡುತ್ತದೆ. ಇದಲ್ಲದೇ, ಎಂ.ಬಿ.ಎ . ಹಾಗೂ ಎಂ.ಸಿ.ಎ. ಪದವಿಗಳನ್ನೂ ವಿಶ್ವವಿದ್ಯಾಲಯ ನೀಡುತ್ತದೆ. == ಹೊರಗಿನ ಸಂಪರ್ಕಗಳು == ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಧಿಕೃತ ಅಂತರಜಾಲ ತಾಣ == ಸ್ಥಳ == ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, "ಜ್ಞಾನ ಸಂಗಮ", ಮಚ್ಚೆ, ಬೆಳಗಾವಿ - ೫೯೦೦೧೮, ಕರ್ನಾಟಕ == ಉಲ್ಲೇಖಗಳು ==